– ಶಿವಮೊಗ್ಗದ ಅಭ್ಯರ್ಥಿ – ಕೆ.ಬಿ.ಪ್ರಸನ್ನಕುಮಾರ್

CIMG1888ಕೆ ಬಿ ಪ್ರಸನ್ನಕುಮಾರ್ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಇವರು ಮೂಲತಃ ಶಿವಮೊಗ್ಗದವರು. ಇವರು ನವೆಂಬರ್ ೧೭, ೧೯೬೮ ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ಇವರ ತಾಯಿ ಭಾಗೀರಥೀ ಬಾಯಿ, ತಂದೆ ಕೃಷ್ಣಮೂರ್ತಿ.

ಪ್ರಸನ್ನಕುಮಾರ್ ಅವರು ೧೯೯೮ ರಲ್ಲಿ ಮೈಸೂರಿನವರಾದ ಪಿ.ಗೀತಾಂಜಲಿಯನ್ನು ವಿವಾಹವಾದರು. ಇವರ ಪತ್ನಿ ಗೀತಾಂಜಲಿ, ಕೆನರಾ ಬ್ಯಾಂಕ್ ಉದ್ಯೋಗಿ. ಇವರ ಪುತ್ರ ಅವಿನಾಶ್ ನೋಂಪಿ ಜ್ನಾನದೀಪ ಶಾಲೆಯ ವಿದ್ಯಾರ್ಥಿ.

ಪ್ರಸನ್ನಕುಮಾರ್ ಅವರು ಅತೀ ಕಿರಿಯ ವಯಸ್ಸಿನಿಂದಲೇ ಸ್ವತಂತ್ರ ಮನೋಭಾವದ ವ್ಯಕ್ತಿ. ಹಾಗಾಗಿ ಅವರು ವಿದ್ಯಾರ್ಥಿ ಜೀವನದಲ್ಲೇ ರಾಜಕೀಯಕ್ಕೆ ಧುಮುಕಿದರು. ಸಮಾಜಸೇವೆಯೇ ಅವರ ಗುರಿಯಾಗಿತ್ತು. ಇಪ್ಪತ್ತರ ಹರೆಯದಲ್ಲೇ ಅವರು ಯುವ ಕಾಂಗ್ರೆಸ್ಸಿನ ಕಾರ್ಯಕರ್ತರಾಗಿದ್ದರು. ಆಗಿನಿಂದಲೇ ಅವರ ಸಮಾಜ ಸೇವೆ, ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಪ್ರಾರಂಭವಾಯಿತು.

ರಾಜಕೀಯವಷ್ಟೇ ಅಲ್ಲದೆ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರಿತಿಕ ಕ್ಷೇತ್ರಗಳಲ್ಲಿ ಇವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಇವರು ಅಲಂಕರಿಸಿದ ಕೆಲವು ಹುದ್ದೆಗಳು ಇಂತಿವೆ

೧. ನಗರಸಭಾ ಸದಸ್ಯರು ಶಿವಮೊಗ್ಗ
೨. ಅಧ್ಯಕ್ಷರು, ಶಿವಮೊಗ್ಗ ನಗರ ಕಾಂಗ್ರೆಸ್ ( ದಕ್ಷಿಣ ವಿಭಾಗ)
೩. ಅಧ್ಯಕ್ಷರು, ವಿಶ್ವೇಶ್ವರಯ್ಯ ಕೋ-ಆಪರೇಟಿವೆ ಸೊಸೈಟಿ
೪. ಅಧ್ಯಕ್ಷರು, ಸೌರಭ ಸಾಂಸ್ಕ್ರಿತಿಕ ಸಂಸ್ಥೆ ಶಿವಮೊಗ್ಗ
೫. ಖಜಾಂಚಿ, ಜಿಲ್ಲಾ ಬ್ರಾಹ್ಮಣ ಮಹಾ ಸಭೆ, ಶಿವಮೊಗ್ಗ
೬. ಉಪಾಧ್ಯಕ್ಷರು, ಜಿಲ್ಲಾ ಮಾಧ್ವ ಸಂಘ, ಶಿವಮೊಗ್ಗ
೭. ಅಧ್ಯಕ್ಷರು, ನಗರಸಭೆ ಗುತ್ತಿಗೆದಾರರ ಸಂಘ
೮. ಉಪಾಧ್ಯಕ್ಷರು, ರಾಜೀವ್ ಗಾಂಧಿ ಕಾರ್ಮಿಕರ ಸಂಘ
೯. ಉಪಾಧ್ಯಕ್ಷರು, ಇಂದಿರಾ ಗಾಂಧಿ ಅಸಂಘಟಿತ ಕಾರ್ಮಿಕರ ಸಂಘ
೧೦. ಎರಡು ದಶಕಗಳಿಂದ ಯುವ ಕಾಂಗ್ರೆಸ್ ಕಾರ್ಯಕರ್ತರು.

ಸಾಧನೆಗಳು

ಇವರು ೨೦೦೭ ರಲ್ಲಿ ಮೊದಲ ಬಾರಿಗೆ ನಗರ ಸಭಾ ಸದಸ್ಯರ ಹುದ್ದೆಗೆ ಚುನಾವಣೆಗೆ ನಿಂತರು. ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಪ್ರಿಯರಾಗಿದ್ದರಿಂದ, ಮೊದಲ ಬಾರಿಯೇ ಚುನಾವಣೆಯಲ್ಲಿ ಗೆದ್ದು ಅಶೋಕನಗರದ ಮುನ್ಸಿಪಲ್ ಕೌನ್ಸಿಲರ್ ಆಗಿ ಆಯ್ಕೆಯಾದರು. ಕಳೆದ ಐದು ವರ್ಷಗಳಲ್ಲಿ ಇವರು ಅಶೋಕನಗರಕ್ಕೆ ಸಲ್ಲಿಸಿರುವ ಸೇವೆ ಗಣನೀಯ. ಇವರ ಜನಸೇವೆಯಿಂದ ಸಂತುಷ್ಟರಾದ ಅಶೋಕನಗರದ ಜನತೆ, ೨೦೧೩ರ ಚುನಾವಣೆಯಲ್ಲಿ ಇವರನ್ನು ಪುನಃ ಕೌನ್ಸಿಲರ್ ಆಗಿ ಭಾರಿ ಬಹುಮತದಿಂದ ಆಯ್ಕೆ ಮಾಡಿದರು. ಒಟ್ಟಾರೆ ಮತದಾನದ ಸಂಖ್ಯೆ ೩೭೩೭, ಅದರಲ್ಲಿ ಪ್ರಸನ್ನಕುಮಾರ್ ಅವರು ಗಳಿಸಿದ ಮತಗಳ ಸಂಖ್ಯೆ ೨೯೧೩.

ಕೌನ್ಸಿಲರ್ ಆಗಿ ಇವರು ಸಲ್ಲಿಸಿದ ಸೇವೆಗಳು ಇಂತಿವೆ.

ಇವರು ಕೌನ್ಸಿಲರ್ ಆಗುವ ಮುನ್ನ ಅಶೋಕನಗರದಲ್ಲಿ ನೀರಿನ ಅಭಾವ ಅಧಿಕವಾಗಿತ್ತು. ಮೂರು ನಾಲ್ಕು ದಿನಗಳಿಗೊಮ್ಮೆ ನೀರನ್ನು ಬಿಡುತ್ತಿದ್ದರು, ಪ್ರಸನ್ನಕುಮಾರರು ಕೌನ್ಸಿಲರ್ ಆದ ಬಳಿಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.
ಅಶೋಕನಗರದ ನೀರಿನ ಬವಣೆಯನ್ನು ಟ್ಯಾಂಕರ್ ಗಳ ಮೂಲಕ ನೀರು ತರಿಸುವುದರಿಂದ ಪೂರೈಸಿದ್ದಾರೆ. ೨೫ ಕಡೆ ಮಿನಿ ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವವಿದ್ದಲ್ಲಿ ನೀರಿನ ಟ್ಯಾಂಕರ್ ಗಳನ್ನು ತರಿಸಲಾಗುತ್ತದೆ.

ಅಶೋಕನಗರದೆಲ್ಲೆಡೆಯಲ್ಲಿ ಬೀದಿ ದೀಪಗಳನ್ನು ಹಾಕಿಸಿದ್ದಾರೆ. ಹಾಗಾಗಿ ರಾತ್ರಿಯ ವೇಳೆ ಮಹಿಳೆಯರು, ಮಕ್ಕಳು, ವಾಹನಗಳು ಜನಸಾಮಾನ್ಯರು ನಿರ್ಭಯವಾಗಿ ಓಡಾಡುವಂತಾಗಿದೆ. ಅಲ್ಲದೆ ಇಲ್ಲಿ ಆರು ಹೈ ಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇನ್ನೂ ಮೂರು ಹೈ ಮಾಸ್ಟ್ ದೀಪಗಳಿಗೆ ಮಂಜೂರಾತಿ ದೊರಕಿದೆ. ಹೀಗಾಗಿ ಅಶೋಕನಗರವನ್ನು ಬೆಳಕಿನ ನಗರವೆಂದು ಕರೆಯಲಾಗುತ್ತಿದೆ.

ಅಶೋಕನಗರದ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್ ಮತ್ತು ಡಾಂಬರ್ ಹಾಕಲಾಗಿದೆ. ಹಾಗಾಗಿ ಇಲ್ಲಿನ ಸಂಚಾರ ವ್ಯವಸ್ಥೆ ಸುಸ್ಥಿತಿಯಲ್ಲಿದೆ.

ಸರ್ಕಾರದಿಂದ ಹಾಗೂ ನಗರ ಸಭೆಯಿಂದ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ಸವಲತ್ತು ಗಳನ್ನು ಅವರವರಿಗೇ ದೊರಕುವಂತೆ ಮಾಡಿದ್ದಾರೆ. ಈ ಎಲ್ಲಾ ಕಾರ್ಯಗಳನ್ನು ಅವರು ಯಾವುದೇ ರೀತಿಯ ಲಂಚ ತೆಗೆದುಕೊಳ್ಳದೇ ಮಾಡಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.

ಬಿಪಿಎಲ್ ಕಾರ್ಡ್, ಹೊಲಿಗೆ ಯಂತ್ರ, ಕಂಪ್ಯೂಟರ್, ಗ್ರೈಂಡರ್, ಸೈಕಲ್ ಗಳನ್ನು ಫಲಾನುಭವಿಗಳಿಗೆ ದೊರಕುವಂತೆ ಮಾಡಿದ್ದಾರೆ.

ವಾರ್ಡ್ ಗಾಗಿ ಇಷ್ಟೆಲ್ಲಾ ದುಡಿದಿರುವ ಪ್ರಸನ್ನಕುಮಾರ್ ಅವರನ್ನು ವಾರ್ಡ್ ನ ಜನತೆ ಭಾರೀ ಬಹುಮತದಿಂದ ಪುನ: ಕೌನ್ಸಿಲರ್ ಆಗಿ ಆಯ್ಕೆ ಮಾಡಿದೆ.

ಹಗಲು ರಾತ್ರಿ ಎನ್ನದೇ ದಿನದ ೨೪ ಗಂಟೆಯೂ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಪ್ರಸನ್ನಕುಮಾರ್ ಆದರ್ಶ ರಾಜಕಾರಣಿ ಎನ್ನುವುದರಲ್ಲಿ ಸಂದೇಹವಿಲ್ಲ.

ಇವರ ಸಾಧನೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಇವರಿಗೆ ಶಿವಮೊಗ್ಗದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ದಿಸಲು ಟಿಕೆಟ್ ನೀಡಿದೆ. ಶಿವಮೊಗ್ಗದ ಜನತೆ ಇವರ ಸಾಧನೆಗಳನ್ನು ಇತರ ಅಭ್ಯರ್ಥಿಗಳ ಸಾಧನೆಗಳೊಂದಿಗೆ ಹೋಲಿಸಿ ಅರ್ಹ ಅಭ್ಯರ್ಥಿಯನ್ನು ಆರಿಸುತ್ತಾರೆ ಎಂಬ ಆಶಯ ನಮ್ಮದು.

ಈಶ್ವರಪ್ಪ ಅವರಂತಹ ಭಾರೀ ರಾಜಕಾರಣಿಗಳೊಂದಿಗೆ ಸೆಣಸಬೇಕಾಗಿರುವ ಪ್ರಸನ್ನಕುಮಾರ್ ಅವರ ಬಳಿ ಇರುವುದು ಒಂದೇ ಅಸ್ತ್ರ, ಅದೆಂದರೆ ನಿಸ್ವಾರ್ಥ ಸೇವೆ, ಜಾತ್ಯಾತೀತತೆ, ಹಾಗೂ ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಬೇಕೆಂಬ ಛಲ.

ಕೆ.ಬಿ.ಪ್ರಸನ್ನಕುಮಾರ್ ಅವರನ್ನು ನೀವು ಸಂಪರ್ಕಿಸಬಹುದಾದ ಮಿಂಚೆ : prasannacouncillor@gmail.com

Advertisements

One comment on “– ಶಿವಮೊಗ್ಗದ ಅಭ್ಯರ್ಥಿ – ಕೆ.ಬಿ.ಪ್ರಸನ್ನಕುಮಾರ್

  1. madhu g bhat says:

    WISH YOU GOOD LUCK SIR, YOU ARE A VERY GOOD LEADER IN SHIMOGA, NAMAGE PARTY MUKYA ALLA, VYAKTHI MUKYA, BEST OF LUCK SIR.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s